Sunday, December 19, 2021

LOOK WHAT I GOT IN THE MAIL YESTERDAY!! A SIGNED COPY OF MIROSLAV HOLUB'S FIRST EDITION POETRY COLLECTION!!!

Just a week ago, I had discovered the renowned Czech poet MIROSLAV HOLUB for myself and had translated one of his poems into Kannada.  As is my wont I wanted to see if any of his books of translated poems are available on amazon.  I found his Collected Translations, the price of which was rather steep for me and there was this collection called SAGITTAL SECTION, a used volume, the price of which I felt was within my range and it would be delivered within the week.  I pressed ‘go.’  And it went and came to me yesterday.  It was a used volume in good condition and it was a ‘first edition’ to boot ... 1980!!  And as I flipped the pages, I found something written on the second page and I opened that page and read it ... I was stunned, surprised, and elated ... MIROSLAV HOLUB’s signature!!!  He had written a few words for a fan or somebody he knew ... and his signature at the bottom ... OOOF MAAN!  This was unbelievable ... I know ‘autographed’ books are available for a price from memorabilia shops, but this just fell into my lap ... from what I can decipher, the original owner of the book as inscribed by the poet was a PAUL KINKADE ... and the book was signed in OKLAHOMA in 1985 ... 

 

This is incredible!!! 




Saturday, October 23, 2021

LET THEM BE, THOSE CITIES THAT HAVE GROWN OLD - ENGLISH TRANSLATION OF H. S. SHIVA PRAKASH'S "Haage Bittubidi Muppaada Shaharugalannu" ಹಾಗೇ ಬಿಟ್ಟುಬಿಡಿ ಮುಪ್ಪಾದ ಷಹರುಗಳನ್ನು

Kannada original: Haage Bittubidi Muppaada Shaharugalannu 

ಹಾಗೇ ಬಿಟ್ಟುಬಿಡಿ ಮುಪ್ಪಾದ ಷಹರುಗಳನ್ನು

Poet: H. S. SHIVA PRAKASH

English translation: S. Jayasrinivasa Rao

 

LET THEM BE, THOSE CITIES THAT HAVE GROWN OLD

 

Let them be, those cities that have grown old

Let them grow old without ever hiding their age

like those enchantingly-aged mortal beauties

 

Look there, those faded walls 

smeared with dust, traffic-smoke stains

The now-rusted gates

that transported to actual orchards

from crumbling multi-storeyed apartments

Hanging like the grand ideals that we abandoned, 

those balconies

That narrow lane is plunging forward 

between the phantoms of cramped houses on either side

 

On the sticky walls of those temples

layers and layers of dried-up oil 

There once resided talkative gods

 

Don’t laugh looking at all these

Don’t mock saying we’ll restore them

 

Allow them to grow old in their silence

narrating their stories in their silence

 

*****


Friday, October 22, 2021

AMMA’S FLUTE - English translation of B. M. BASHEER's "AMMANA KOLALU" ಅಮ್ಮನ ಕೊಳಲು

Dear friends ... here is my English translation of B. M. Basheer's Kannada poem AMMANA KOLALU ಅಮ್ಮನ ಕೊಳಲು ... sometime during last year, I had bought a set of Kannada poetry books and Mr Basheer's 'Amma Hachchida Ole' ಅಮ್ಮ ಹಚ್ಚಿದಒಲೆ was one of them ... I was immediately struck with the four lines that appear on the cover ... I had also shared that on my wall here ... I had always wanted to try my hand at translating one of his poems and I tried ... 


AMMA’S FLUTE

 

The other day I had

attended a flute concert ...

I saw his effort at creating 

music out of his breath

I remembered my mother

 

Sitting in front of the earthen 

stove in the kitchen

She would put an iron pipe,

similar to the bamboo pipe,

to her lips and blow into it

A tune would emerge

Leaning against her back

I would savour the tune

 

Like a sleeping serpent

suddenly unfurling its hood,

the damp firewood

on hearing the tune 

would set itself ablaze

 

To the remembered

music of my mother

who blew into the iron flute

and lit the fire in my heart,

this musician’s flute is 

damp firewood

 

*****


Saturday, September 4, 2021

ಉದುರಾಟ

ಉದುರಾಟ

 

ನಿದ್ರೆಯ ಆಯಾಸದಿಂದ 

ಎದ್ದು ಮೈ ಕೈ 

ಮುರಿಯುತ್ತಿರುವಾಗ

ಕಟ ಕಟ ಸದ್ದಿನ ಜೋಡಿ

ಪಟ ಪಟ ಸದ್ದು 

ಕೇಳಿ ಬಂತು

ಕಿವಿಗೊಟ್ಟು ಕೇಳಿದೆ

ಏನೋ ಪುಟಿಯುತ್ತಿದೆ

ಪಟ .... ಪಟ .... ಪಟಪಟ .... ಪಟ ....

ಒಂದಲ್ಲ, ಎರಡಲ್ಲ, ಸುಮಾ...ರು 

ಕರ್ಟನ್ ಕೋಣೆಯ ಅರೆ ಕತ್ತಲು ಬೆಳಕಿನಲ್ಲಿ

ಬಗ್ಗಿ ನಲವ ನೋಡಿದೆ

ಮಂಕು ಮಂಕಾಗಿ ಕಂಡವು

ಸಣ್ಣ ಸಣ್ಣ ಗೋಲಿಯಾಕಾರದ

ಬಣ್ಣ ಬಣ್ಣದ ಮಣಿಗಳಂತೆ

ಪುಟಿಯುತ್ತಿದ್ದವು

ಪಟ .... ಪಟಪಟ ... ಪಟ .... ಪಟ ....

ಕನ್ನಡಕ ಏರಿಸಿ ನೋಡಿದೆ

ಸುಮಾರು ಹದಿನೈದು ಇಪ್ಪತು ಇರಬಹುದು

ಹೆಚ್ಚಿನವು ಬೂದು ಬಣ್ಣದ್ದು

ಒಂದೆರಡು ಕಂದು ಬಣ್ಣದ್ದು

ಕೆಲವು ಕಪ್ಪು ಬಣ್ಣದ್ದು

ಒಂದು ಬಿಳಿಯಾಗಿತ್ತು

ಒಂದೇ ಸಮ

ಪಟಪಟ .... ಪಟ .... ಪಟಪಟ .... ಪಟ ....

ಪುಟಿಯುತ್ತಿದ್ದವು

ಏನಿವು? ಎಲ್ಲಿಂದ ಬಂದವು?

ಹೇಗೆ ಬಂದವು?

ಕಟ ಕಟ ಮೈ ಕೈ ಮುರಿದಾಗ

ಗಂಟು ಕಟ್ಟು ಕತ್ತು ಪಕ್ಕೆಗಳಿಂದ 

ಪಟ ಪಟ ದುರಿದ

ನೆಟಿಕೆಗಳಿರಬಹುದೋ?

ಪುಟಿಯುತ್ತಿದ್ದವು

ಪಟ .... ಪಟ .... ಪಟಪಟ .... ಪಟ ....


***** 

Monday, May 31, 2021

ಕಂಬಳಿ ಹುಳು

 ಕಂಬಳಿ ಹುಳು

 

ಕಂಬಳಿ ಹುಳುವೆ ಕಂಬಳಿ ಹುಳುವೆ

ಬೇಸಿಗೆಯಲಿ ನಿನಗೆ ಶೆಕೆಯಾಗುದಿಲ್ಲವೆ?

ಕಂಬಳಿ ಬಗ್ಗೆ ಚಿಂತಿಸುವುದಿಲ್ಲ ನಾ

ಅದು ಹೊರಗಿರುತ್ತೆ

ನಾ ಒಳಗಿರುತ್ತೆ

 

ನಾ ಹೊರಗೆ ಮಾತ್ರ ಕಂಬಳಿ ಕಂಬಳಿ

ಕಂಡವರಿಗೆ ಮಾತ್ರ ಶೆಕೆ ಶೆಕೆ

ಒಳಗೆ ನಾ ತಂಪು ತಂಪು

ನನ್ನೊಳಗೆ ಬಣ್ಣ ಬಣ್ಣ

- ಚಿಟ್ಟೆ ಅವಿತಿದೆ

ಅದ ಬೆಚ್ಚಗಿಡುತ್ತದೆ ಕಂಬಳಿ

ನನ್ನೊಳು ಚಿಟ್ಟೆಯೋ

ಚಿಟ್ಟೆಯೊಳು ನಾನೋ

 

ಹೀಗೆ ಏನೆಲ್ಲ ಎರವಲು ತತ್ವ

ಹೇಳುತ್ತಲಿತ್ತು ಕಂಬಳಿ ಹುಳು

ಯಾಕೆ ಕೇಳಿದೆನಪ್ಪ ಅಂತೆನಿಸಿ

ಸರಿ ಬರ್ತೀನಿ ಕಂಬಳಿ ಹುಳುವೇ

ಅಂತ ಹೊರಟೆ

 

ಓಯ್ ಮಾರಾಯಾ

ನನ್ನಷ್ಟಕ್ಕೆ ಹಸಿರೆಲೆ ತಿನ್ನುತ್ತಿದ್ದೆ

ಸುಮ್ಮನೆ ಬಂದು ನೀ ಕೆಣಕಿದೆ

ಈಗ ನಾ ಹೇಳುವುದನೆಲ್ಲ

ಕೇಳಿಯೇ ಹೋಗುವುದು

ಇಲ್ಲವಾದರೆ ನಾ ನಿನ್ನ ಮೇಲೆ

ಜಿಗಿದರೆ ನಿನ್ನ ಮೈಯೆಲ್ಲ

ತುರಿಕೆ ತುರಿಕೆ

ಇನ್ನೊಂದು ವಾರದಲ್ಲಿ

ನಾ ಚಿಟ್ಟೆಯಾಗುವೆ

ನೀ ಮೈ ತುರಿಸುತ್ತಾ ಇರು

ಹೇಗೆ?

 

ಇಲ್ಲನೀ ನಿನ್ನ ಮಾತ ಹೇಳು

ಒಂದು ವಾರ ತಾನೆಕೂತು ಕೇಳ್ತೇನೆ

ನೀ ಚಿಟ್ಟೆಯಾಗುವುದ ಕೂತು ನೋಡ್ತೇನೆ


*****

ಹೀಗೊಂದು ಆಸೆ

ಹೀಗೊಂದು ಆಸೆ

 

ಮೂರನೆ ಮಹಡಿಯ ಫ್ಲಾಟಿನ 

ಬಾಲ್ಕನಿಗಂಟಿದ ನನ್ನ ಕೋಣೆಯಲಿ ಕೂತು

ಹಗಲಲ್ಲಿ ಓದು ಬರಹ ಅದೂ ಇದೂ

ಮಾಡುತ್ತಾ ...

 

ಎಷ್ಟೊಂದು ಸದ್ದು ಹೊರಗಿಂದ

ರಸ್ತೆಯಲಿ ಬರುವವರು ಮಾರುವವರು

ಬೆಳ್-ಬೆಳಗ್ಗೆ ಅನ್ವರ್ ಹೂವಿನಂವ

ಪಲ್ಯಾಕಾಯಿ ಮಾರುವವರಂತೂ ಸದಾ ಬ‌ರ್ತಿರ್ತಾರೆ

ಹಣ್ಣು ಮಾರುವವರೂ ಸಹ

ವಾರಕ್ಕೆ ಮೂರು ಸಲ ಮೀನಿನಂವ

ಗ್ಯಾಸ್ ರಿಪೇರಿಯಂವ

ಸೊ‌ಫಾ ರಿಪೇರಿಯಂವ

ಸೀರೆ, ಬಟ್ಟೆ, ಬೆಡಶೀಟ್ ಮಾರುವವರು ಬೇರೆ

ಒಂದೊಂದ್ಸಲ ಕತ್ತೆ ಹಾಲು ಮಾರುವವ ಕೂಡ

ಕತ್ತೇನ ಕರ್ಕೊಂಡೇ ಬಾರ್ತಾನೆ

 

ಎಲ್ಲ್ರದ್ದೂ ಬೊಬ್ಬೆಯೋ ಬೊಬ್ಬೆ

ಹೂವಿನ ಅನ್ವರ್ “ಚಾಮಂತಿ ಪೂಲ್ ... ಗುಲಾಬಿ ಪೂಲ್ ...” ಅಂತ ಕಿರುಚುತ್ತಾನೆ

ಗ್ಯಾಸ್ ಸ್ಟವ್ ರಿಪೇರಿ ಶೇಖರ್ ಮಾತನ್ನು ರೆಕಾರ್ಡ 

ಮಾಡಿಸಿ ಸ್ಪೀಕರ ಮೂಲಕ ಕಿರುಚಿಸುತ್ತಾನೆ

ಕೆಲವರು ಕಿರುಚುತ್ತಾರೆ 

ಕೆಲವರು ಸ್ಪೀಕರ್ ಮೂಲಕ ಕಿರುಚಿಸುತ್ತಾರೆ

ಕೆಲವರ ಕಿರುಚಾಟ ಅರ್ಥ ಆಗುತ್ತೆ

ಕೆಲವರ ಕಿರುಚಾಟ ಬರೀ ಕಿರುಚಾಟ

ಏನು ಮಾರುತ್ತಾರೋ ಏನೂ ಗೊತ್ತಾಗೊಲ್ಲ

 

ನನ್ನದೊಂದು ಆಸೆ ... 

ಒಂದು ದೊಡ್ಡ ಬಟ್ಟೆ ಚೀಲವನ್ನು

ಬೆನ್ನಮೇಲೆ ಹಾಕಿಕೊಂಡು

ಯಾವುದೋ ದೂರದ ಅಪರಿಚಿತ 

ಬಡಾವಣೆಗೆ ಹೋಗಿ 

ಯಾರಿಗೂ ಅರ್ಥವಾಗದ ಯಾವುದೋ 

ಒಂದು ಪದವನ್ನು ಜೋರು ಜೋರಾಗಿ

ಕಿರುಚುತ್ತಾ

ಸ್ವಲ್ಪ ವೇಳೆ ಸುಮ್ಮನೆ ಹೀಗೆಯೇ

ತಿರುಗಾಡಿ ಬರಬೇಕೆಂಬ ಆಸೆ.

 

ಅಲ್ವಾ ಮಾರಾಯ,

ಆಸೆಗೊಂದು ಅರ್ಥ ಬೇಡವಾ?

*****