ಕಂಬಳಿ ಹುಳು
ಕಂಬಳಿ ಹುಳುವೆ ಕಂಬಳಿ ಹುಳುವೆ
ಬೇಸಿಗೆಯಲಿ ನಿನಗೆ ಶೆಕೆಯಾಗುದಿಲ್ಲವೆ?
ಕಂಬಳಿ ಬಗ್ಗೆ ಚಿಂತಿಸುವುದಿಲ್ಲ ನಾ
ಅದು ಹೊರಗಿರುತ್ತೆ
ನಾ ಒಳಗಿರುತ್ತೆ
ನಾ ಹೊರಗೆ ಮಾತ್ರ ಕಂಬಳಿ ಕಂಬಳಿ
ಕಂಡವರಿಗೆ ಮಾತ್ರ ಶೆಕೆ ಶೆಕೆ
ಒಳಗೆ ನಾ ತಂಪು ತಂಪು
ನನ್ನೊಳಗೆ ಬಣ್ಣ ಬಣ್ಣ
-ದ ಚಿಟ್ಟೆ ಅವಿತಿದೆ
ಅದ ಬೆಚ್ಚಗಿಡುತ್ತದೆ ಕಂಬಳಿ
ನನ್ನೊಳು ಚಿಟ್ಟೆಯೋ
ಚಿಟ್ಟೆಯೊಳು ನಾನೋ
ಹೀಗೆ ಏನೆಲ್ಲ ಎರವಲು ತತ್ವ
ಹೇಳುತ್ತಲಿತ್ತು ಕಂಬಳಿ ಹುಳು
ಯಾಕೆ ಕೇಳಿದೆನಪ್ಪ ಅಂತೆನಿಸಿ
ಸರಿ ಬರ್ತೀನಿ ಕಂಬಳಿ ಹುಳುವೇ
ಅಂತ ಹೊರಟೆ
ಓಯ್ ಮಾರಾಯಾ,
ನನ್ನಷ್ಟಕ್ಕೆ ಹಸಿರೆಲೆ ತಿನ್ನುತ್ತಿದ್ದೆ
ಸುಮ್ಮನೆ ಬಂದು ನೀ ಕೆಣಕಿದೆ
ಈಗ ನಾ ಹೇಳುವುದನೆಲ್ಲ
ಕೇಳಿಯೇ ಹೋಗುವುದು
ಇಲ್ಲವಾದರೆ ನಾ ನಿನ್ನ ಮೇಲೆ
ಜಿಗಿದರೆ ನಿನ್ನ ಮೈಯೆಲ್ಲ
ತುರಿಕೆ ತುರಿಕೆ
ಇನ್ನೊಂದು ವಾರದಲ್ಲಿ
ನಾ ಚಿಟ್ಟೆಯಾಗುವೆ
ನೀ ಮೈ ತುರಿಸುತ್ತಾ ಇರು
ಹೇಗೆ?
ಇಲ್ಲ, ನೀ ನಿನ್ನ ಮಾತ ಹೇಳು
ಒಂದು ವಾರ ತಾನೆ, ಕೂತು ಕೇಳ್ತೇನೆ
ನೀ ಚಿಟ್ಟೆಯಾಗುವುದ ಕೂತು ನೋಡ್ತೇನೆ
*****
2 comments:
Very nice Jaisiri.... nimma blog follow madtirodu sarthaka aithu! You seem to be mellowing like fine wine... there's depth and grit in your writing... keep going!
ಧನ್ಯವಾದಗಳು ಪ್ರದೀಪ್ ... ನಿಮ್ಮ ಮಾತುಗಳು ಸ್ಫೂರ್ತಿದಾಯಕ ...
Post a Comment